ಅಭಿಪ್ರಾಯ / ಸಲಹೆಗಳು

ಜಲಾನಯನ ಅಭಿವೃದ್ಧಿ ಮೂಲಕ ಬರಗಾಲವನ್ನು ತಡೆಯುವಿಕೆ ಕಾರ್ಯಕ್ರಮ (ಡಬ್ಲ್ಯೂ ಡಿ ಡಿ ಪಿ)

 

  ಪರಿಚಯ


ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ ಪೆಬ್ರವರಿ-2019ರ ಆಯವ್ಯಯ ಭಾಷಣದಲ್ಲಿ ಈ ಕೆಳಕಂಡಂತೆ ಪ್ರಸ್ತಾಪಿಸಿರುತ್ತಾರೆ “ಕೇಂದ್ರ ಸರ್ಕಾರದ ಅನುದಾನದೊಂದಿಗೆ ಕರ್ನಾಟಕ ರಾಜ್ಯದಲ್ಲಿ 2018-19ರವರೆಗೆ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, 2019-20ರಿಂದ ಈ ಒಂದು ಉತ್ತಮ ಯೋಜನೆಗೆ ಕೇಂದ್ರ ಸರ್ಕಾರವು ಅನುದಾನ ನಿಲ್ಲಿಸಿದೆ. ಈ ಹಿನ್ನೆಲೆಯಯಲ್ಲಿ ಜಲಾನಯನ ಪ್ರದೇಶವನ್ನು ಕಾಪಾಡುವ ಉದ್ದೇಶದಿಂದ 2019-2024ನೇ ಸಾಲಿನ ರಾಜ್ಯದ ಆಯ್ದ 100 ಬರಪೀಡಿತ ಮತ್ತು ಅತೀ ಹೆಚ್ಚು ಅಂತರ್ಜಲ ಕುಸಿತ ಇರುವ ತಾಲ್ಲೂಕುಗಳಲ್ಲಿ, ಪ್ರತಿ ತಾಲ್ಲೂಕಿನಲ್ಲಿ 3000 ರಿಂದ 7500 ಹೆಕ್ಟೇರ್ ಪ್ರದೇಶವನ್ನು ಭೂ ಸಂಪನ್ಮೂಲ ಸಮೀಕ್ಷೆಯ ಆಧಾರದ ಮೇಲೆ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ಸಂಪೂರ್ಣ ಉಪಚಾರದ ವಿಧಾನದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಕಾರ್ಯಕ್ರಮದೊಡನೆ ಒಗ್ಗೂಡಿಸಿ ಬರ ನಿರೋಧಕ ಜಲಾನಯನ ಚಟುವಟಿಕೆಗಳನ್ನು ಅನುಷ್ಠಾನ ಮಾಡುವ ಅಗತ್ಯತೆ ಇರುತ್ತದೆ. ಸದರಿ ಯೋಜನೆಯ ಅನುಷ್ಠಾನಕ್ಕಾಗಿ 2019-20ನೇ ಸಾಲಿನಲ್ಲಿ ರಾಜ್ಯದ ಆಯವ್ಯಯದಲ್ಲಿ ರೂ. 100.00 ಕೋಟಿಗಳ ಅನುದಾನ ಒದಗಿಸಲಾಗಿದೆ.

 


ಕರ್ನಾಟಕ ರಾಜ್ಯದಲ್ಲಿ ಒಟ್ಟು ಭೌಗೋಳಿಕ ವಿಸ್ತೀರ್ಣವು ಒಟ್ಟು 190.50 ಲಕ್ಷ ಹೆಕ್ಟೇರ್ ಪ್ರದೇಶವಿದ್ದು, ಇದರಲ್ಲಿ 129.70 ಲಕ್ಷ ಹೆಕ್ಟೇರ್ ಪ್ರದೇಶವು ಜಲಾನಯನ ಉಪಚಾರಕ್ಕೆ ಲಭ್ಯವಿರುತ್ತದೆ. ಇದುವರೆವಿಗೂ ಜಲಾನಯನ ಅಭಿವೃದ್ಧಿ ಯೋಜನೆಗಳ ಮೂಲಕ ಇಲಾಖೆಯ ಸುಮಾರು 70.13 ಲಕ್ಷ ಹೆಕ್ಟೇರ್ ಪ್ರದೇಶವನ್ನು ಉಪಚರಿಸಲಾಗಿದೆ. ಇನ್ನುಳಿದ 52.31 ಲಕ್ಷ ಹೆಕ್ಟೇರ್ ಪ್ರದೇಶವನ್ನು ಜಲಾನಯನ ತಳಹದಿಯ ಮೇಲೆ ಉಪಚರಿಸಲು ರಾಜ್ಯದಲ್ಲಿ ಬಾಕಿ ಇರುತ್ತದೆ.

ಈ ಮೇಲಿನ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಪ್ರದೇಶದ ರೈತರ ಆದಾಯವನ್ನು ಹೆಚ್ಚಿಸಲು, ಜಲಾನಯನ ಪ್ರದೇಶದ ಸ್ವಾಭಾವಿಕ ಸಂಪನ್ಮೂಲಗಳನ್ನು ನಿರ್ವಹಿಸಲು ಸ್ಥಳೀಯ ಸಮುದಾಯ ಸಂಘಗಳ ಸಾಮಥ್ರ್ಯವನ್ನು ಹೆಚ್ಚಿಸಲು, ಭೂರಹಿತರಿಗೆ ಜಿವನೋಪಾಯ ಚಟುವಟಿಕೆಗಳನ್ನು ಅನುಷ್ಠಾನಮಾಡಲು, ಹಸಿರು ಹೊದಿಕೆ, ಮೇವು, ಇಂಧನ ಮತ್ತು ಅಂತರ್ಜಲ ಮರುಪೂರಣದ ಮೂಲಕ ಜಲಾನಯನ ಉಪಚಾರ ಮಾಡಲು ಯೋಜನೆಯನ್ನು ಕೈಗೊಳ್ಳಲಾಗಿದೆ.

 

 

  • ಭೂ ಸಂಪನ್ಮೂಲ ಮಾಹಿತಿಯ ಆಧಾರದ ಮೇಲೆ ಮತ್ತು/ಅಥವಾ ವೈಜ್ಞಾನಿಕ ಜಲಾನಯನ ತತ್ವದ ಮೇಲೆ ನೈಸರ್ಗಿಕ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಿ ಮಳೆಯಾಶ್ರಿತ ಪ್ರದೇಶದ ಕೃಷಿ ಭೂಮಿಯ ಫಲವತ್ತತೆ ಹಾಗೂ ಅದರ ಉತ್ಪನ್ನ ಶಕ್ತಿಯನ್ನು ಹೆಚ್ಚಿಸುವುದು.
  • ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣವನ್ನು ಸುಧಾರಿಸುವುದು.
  • ತೇವಾಂಶ ಲಭ್ಯತೆ ಹಾಗೂ ರಕ್ಷಾಣಾತ್ಮಕ ನೀರಾವರಿಗೆ ಮಳೆ ನೀರು ಕೊಯ್ಲು ಕ್ರಮಗಳನ್ನು ಅಳವಡಿಸುವುದು.
  • ವ್ಯವಸಾಯ ಯೋಗ್ಯವಲ್ಲದ ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸುವುದು.
  • ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟ ಸುಧಾರಣೆಗೊಳಿಸುವುದರೊಂದಿಗೆ, ಆಸ್ತಿ ರಹಿತ ದುರ್ಬಲ ವರ್ಗದ ಜನರಿಗೆ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯ ನೀಡುವುದು ಮತ್ತು ಗುಣಮಟ್ಟದ ಕೌಶಲ್ಯ ಆಧಾರಿತ ತರಬೇತಿಯ ಮೂಲಕ, ಸ್ಥಳೀಯವಾಗಿ ಉದ್ಯೋಗವಕಾಶಗಳನ್ನು ಒದಗಿಸುವುದು.
  • ಯೋಜನಾ ಪ್ರದೇಶದ ವ್ಯಾಪ್ತಿಯ ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸುವ ಮೂಲಕ ಮಣ್ಣಿನ ಆರೋಗ್ಯ ಸುಧಾರಿಸುವುದು
  • ಜಲಾನಯನ ಪ್ರದೇಶದಲ್ಲಿ ಹಸಿರು ಹೊದಿಕೆಯ ಹೆಚ್ಚಳ
  • ಇಂಧನ, ಮೇವು ಉತ್ಪಾದನೆ ಮತ್ತು ಹಾಲು ಉತ್ಪಾದನೆಯಲ್ಲಿ ಹೆಚ್ಚಳ
  • ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮಾಡಲು ಸ್ಥಳೀಯ ಸಮುದಾಯ ಸಂಘಟನೆಗಳ ಸಾಮಥ್ರ್ಯವನ್ನು ಹೆಚ್ಚಿಸುವುದು.

 

 

ಈ ಉಪಜಲಾನಯನಗಳಲ್ಲಿನ ಯೋಜನಾ ಪ್ರದೇಶಗಳನ್ನು ಈ ಕೆಳಗಿನ ಮಾನದಂಡಗಳನ್ನು ಉಪಯೋಗಿಸಿ ಆಯ್ಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ರಾಜ್ಯದ ಎಲ್ಲಾ ಜಿಲ್ಲೆಗಳ ಜಲಾನಯನ ಪ್ರದೇಶವನ್ನು ಉಪ ಜಲಾನಯನ ಕ್ಷೇತ್ರಗಳಾಗಿ ವಿಂಗಡಿಸಿದೆ. ರಾಜ್ಯದಲ್ಲಿ ಒಟ್ಟು 3515 ಉಪ ಜಲಾನಯನಗಳನ್ನು ಹಾಗೂ 34,299 ಕಿರುಜಲಾನಯನಗಳನ್ನು ಗುರುತಿಸಲಾಗಿದೆ ಹಾಗೂ ಈ ಎಲ್ಲಾ ಉಪ ಜಲಾನಯನಗಳ ಮೋಜಿಣಿ ಮತ್ತು ವಿಷಯಾಧಾರಿತ ನಕಾಶೆಗಳು ಇಲಾಖೆಯಲ್ಲಿ ಲಭ್ಯವಿರುತ್ತದೆ. ಈ ಕೆಳಗಿನ ಮಾನದಂಡಗಳನ್ನು ಉಪಯೋಗಿಸಿ ಯೋಜನೆಗಳನ್ನು ಆಯ್ಕೆ ಮಾಡಲಾಗುವುದು.

  1. ಅಂತರ್ಜಲ ಶೋಷಿತ ತಾಲ್ಲೂಕುಗಳು
  2. ಸತತ ಬರಗಾಲಕ್ಕೆ ತುತ್ತಾದ ತಾಲ್ಲೂಕುಗಳು
  3. ಒಂದೆ ಕಡೆ ಲಭ್ಯವಾಗುವ ಕಿರುಜಲಾನಯಗಳ ಗೊಂಚಲಿನ ಉಪ ಜಲಾನಯನ ಪ್ರದೇಶ
  4. ಯೋಜನಾ ಪ್ರದೇಶದಲ್ಲಿ ಲಭ್ಯವಿರುವ ಭೂಸಂಪನ್ಮೂಲ ಮಾಹಿತಿಗಳು
  5. ಹೆಚ್ಚು ಜಲಾನಯನ ಉಪಚಾರಕ್ಕೆ ಲಭ್ಯವಿರುವ ಪ್ರದೇಶ
  6. ದಿಬ್ಬದಿಂದ ಕಣಿವೆ ಮಾದರಿಯಲ್ಲಿರುವ ಜಲಾನಯನದ ಅನುಷ್ಠಾನಕ್ಕೆ ಯೋಗ್ಯ ಪ್ರದೇಶ

 

 

ಈ ಹಂತದಲ್ಲಿ ಯೋಜನೆಯ ಅನುಷ್ಠಾನಕ್ಕೆ ಮುನ್ನ ಯೋಜನಾ ವ್ಯಾಪ್ತಿಯ ಜನರ ವಿಶ್ವಾಸವನ್ನು ಗಳಿಸಲು, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಸಂಬಂದಿಸಿದ ಮತ್ತು ಸಮುದಾಯಕ್ಕೆ ತಕ್ಷಣ ಅವಶ್ಯಕವಿರುವ ಪ್ರವೇಶದ್ವಾರ ಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗುವುದು. ಇದಲ್ಲದೇ ಅರಿವು ಮೂಡಿಸುವ ಕಾರ್ಯಕ್ರಮಗಳಾದ ಗ್ರಾಮ ಸಭಾ, ಜಾಥಾ, ಸಮುದಾಯ ಆಧಾರಿತ ಸಂಘಗಳ ರಚನೆ ಮತ್ತು ಅವುಗಳ ಬಲವರ್ಧನೆ. ಯೋಜನೆಯ ಅನುಷ್ಠಾನಕ್ಕೆ ಸ್ವಸಹಾಯ ಗುಂಪು, ಬಳಕೆದಾರರ ಗುಂಪು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರ ಅಧ್ಯಕ್ಷತೆಯ ಜಲಾನಯನ ಸಮಿತಿಗಳನ್ನು ರಚಿಸಲಾಗುವುದು. ಜಲಾನಯನ ಸಮಿತಿಯು ಗ್ರಾಮ ಪಂಚಾಯತಿಯ ಉಪ ಸಮಿತಿಯಾಗಿರುತ್ತದೆ. ಈ ಜಲಾನಯನ ಸಮಿತಿ ಮತ್ತು ಯೋಜನಾ ಅನುಷ್ಠಾನ ಸಂಸ್ಥೆಯ ಮೂಲಕ ನಿವ್ವಳ ಯೋಜನೆ ಮತ್ತು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುವುದು.

ಯೋಜನಾ ಅನುಷ್ಠಾನ ಸಂಸ್ಥೆಯ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ, ಗ್ರಾಮ ಸಭೆ ಮತ್ತು ಜಲಾನಯನ ಸಮಿತಿಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ವಿಸ್ತೃತ ಯೋಜನಾ ವರದಿಯನ್ನು ಜಂಟಿ ಕೃಷಿ ನಿರ್ದೇಶಕರ ಅದ್ಯಕ್ಷತೆಯ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯಿಂದ ತಾಂತ್ರಿಕ ಪರಿಶೀಲನೆ ಕೈಗೊಳ್ಳಲಾಗುವುದು. ನಂತರ ವಿಸ್ತೃತ ಯೋಜನಾ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಜಿಲ್ಲಾ ಪಂಚಾಯತ್ ರವರ ಅದ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿ ಮತ್ತು ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ದಿ ಆಯುಕ್ತರು ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯ ರಾಜ್ಯ ಮಟ್ಟದ ನೋಡಲ್ ಏಜನ್ಸಿಯ ಮಂಜೂರಾತಿ ಪಡೆದು, ವಿಸ್ತೃತ ಯೋಜನಾ ವರದಿಯ ಪ್ರಕಾರ ಜಲಾನಯನ ಕಾಮಗಾರಿಗಳನ್ನು ಜಲಾನಯನ ಸಮಿತಿ ಮತ್ತು ಯೋಜನಾ ಅನುಷ್ಠಾನ ಸಂಸ್ಥೆಯ ಮೂಲಕ ಅನುಷ್ಠಾನ ಮಾಡಲಾಗುವುದು.

ಈ ಹಂತದ ಅನುಷ್ಠಾನ ಅವಧಿಯು 6 ರಿಂದ 12 ತಿಂಗಳುಗಳಾಗಿರುತ್ತದೆ.

 

 

ಅನುಮೋದನೆಯಾದ ವಿಸ್ತೃತ ಯೋಜನಾ ವರದಿಯ ಪ್ರಕಾರ ಪ್ರತಿ ವರ್ಷ ಚಟುವಟಿಕೆ/ಕಾಮಗಾರಿಗಳಿಗೆ ವರ್ಷವಾರು ಕ್ರಿಯಾ ಯೋಜನೆಯನ್ನು ತಯಾರಿಸಿ ಗ್ರಾಮ ಸಭೆ, ಜಲಾನಯನ ಸಮಿತಿ ಮತ್ತು ಯೋಜನಾ ಅನುಷ್ಠಾನ ಸಂಸ್ಥೆಯ ಅನುಮೋದನೆ ಪಡೆದು ಅನುಷ್ಠಾನ ಮಾಡಲಾಗುವುದು. ಪ್ರಮುಖ ಚಟುವಟಿಕೆಗಳಾದ ಬದು ಕಾಮಗಾರಿ, ಕೃಷಿ ಹೊಂಡ, ತಡೆ ಅಣೆ/ಕಿಂಡಿಅಣೆ, ನಾಲಾಬದು, ಜಿನುಗು ಕೆರೆ ಮೊದಲಾದ ಕಾಮಗಾರಿಗಳ ಮೂಲಕ ಮಳೆ ನೀರು ಸಂಗ್ರಹಣೆ ಮಾಡಿ ಇಂಗಿಸಿ, ಮಣ್ಣು ಸಂರಕ್ಷಣೆಯನ್ನು ಕೈಗೊಳ್ಳಲಾಗುವುದು. ಇದಲ್ಲದೇ ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆಗಳಿಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಸಹ ಅನುಷ್ಠಾನ ಮಾಡಲಾಗುವುದು. ಉಪಚರಿಸಲಾದ ಪ್ರದೇಶದಲ್ಲಿ ಉತ್ಪಾದನಾ ವ್ಯವಸ್ಥೆ ಚಟುವಟಿಕೆಗಳ ಅನುಷ್ಠಾನ. ಸ್ವಸಹಾಯ ಗುಂಪುಗಳಿಗೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಸಂಪೂರ್ಣ ಜಲಾನಯನ ಉಪಚಾರಕ್ಕೆ ಅಗತ್ಯವಿರುವ ಅನುದಾನವನ್ನು ಇತರೆ ಮೂಲಗಳಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮತ್ತು ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ-ಇತರೆ ಉಪಚಾರಗಳು ಹಾಗೂ ಇತರೆ ಯೋಜನೆಗಳೊಂದಿಗೆ ಒಗ್ಗೂಡಿಸುವುದರ ಮೂಲಕ ಅನುಷ್ಠಾನ ಮಾಡಲಾಗುವುದು.

ಈ ಹಂತದ ಅನುಷ್ಠಾನ ಅವಧಿಯು 3 ವರ್ಷಗಳಾಗಿರುತ್ತದೆ.

 

 

ಮಂಜೂರಾದ ವಿಸ್ತೃತ ಯೋಜನಾ ವರದಿಯ ಪ್ರಕಾರ ಎಲ್ಲಾ ಚಟುವಟಿಕೆಗಳನ್ನು ಅನುಷ್ಠಾನ ಮಾಡಿದ ನಂತರ ಅಭಿವೃದ್ಧಿಪಡಿಸಲಾದ ನೈಸರ್ಗಿಕ ಸಂಪನ್ಮೂಲಗಳನ್ನು ನಿರಂತರವಾಗಿ ನಿರ್ವಹಿಸುವುದು ಮತ್ತು ಭವಿಷ್ಯದ ಬಳಕೆಗಾಗಿ ಜೀವನೋಪಾಯ ಚಟುವಟಿಕೆಗಳಡಿ ಕ್ಷೇತ್ರದೊಳಗಿನ ಮತ್ತು ಹೊರಗೆ ಕಲಿತ ಅನುಭವಗಳ ಹಾಗೂ ಪಾಠಗಳ ದಾಖಲೆ ಇಡುವುದು. ಜಲಾನಯನ ಅಭಿವೃದ್ಧಿ ನಿಧಿಯನ್ನು ಬಳಸಿ ಯೋಜನಾ ನಂತರದ ಸುಸ್ಥಿರತೆಯನ್ನು ಗ್ರಾಮ ಪಂಚಾಯತಿಗಳನ್ನು ತೊಡಗಿಸಿಕೊಳ್ಳುವುದರ ಮೂಲಕ ರೂಪಿಸಲಾಗುವುದು.

ಈ ಹಂತದ ಅನುಷ್ಠಾನ ಅವಧಿಯು 1 ವರ್ಷಗಳಾಗಿರುತ್ತದೆ.

 

 

ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ-II (ಸುಜಲ-III) ಯೋಜನೆಯಡಿ ಕೈಗೊಳ್ಳಲಾದ ಭೂ ಸಂಪನ್ಮೂಲ ಮಾಹಿತಿ ಮತ್ತು ಜಲಶಾಸ್ತ್ರದ ವಿವರಗಳನ್ನು ಜಲಾನಯನ ಯೋಜನೆಗಳನ್ನು ವ್ಶೆಜ್ಞಾನಿಕವಾಗಿ ಯೋಜಿಸಲು ಮತ್ತು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು.

ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MGNREGA) ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ-ಇತರೆ ಉಪಚಾರಗಳು (PMKSY-OI) ಹಾಗೂ ಇತರೆ ಚಾಲ್ತಿಯಲ್ಲಿರುವ ಯೋಜನೆಗಳನ್ನು ಒಗ್ಗೂಡಿಸಿಕೊಂಡು ಬರ ಪೀಡಿತ ಮತ್ತು ಅಂತರ್ಜಲ ಶೋಷಿತ ತಾಲ್ಲೂಕುಗಳ ಮಳೆಯಾಶ್ರಿತ ಜಲಾನಯನಗಳಲ್ಲಿ ಬರ ನಿರೋಧಕ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

ಕಾರ್ಮಿಕ ಆಧಾರಿತ ಕಾಮಗಾರಿಗಳಾದ ಬದು ನಿರ್ಮಾಣ, ಜಲಮರುಪೂರಣ ಕೃಷಿ ಹೊಂಡ ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (MGNREGA) ಮತ್ತು ಸಾಮಾಗ್ರಿ ಆಧಾರಿತ ತಡೆಅಣೆ/ಕಿಂಡಿಅಣೆ/ಇತರೆ ಕಾಮಗಾರಿಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ-ಇತರೆ ಉಪಚಾರಗಳು (PMKSY-OI) ಹಾಗೂ ಚಾಲ್ತಿಯಲ್ಲಿರುವ ಯೋಜನೆಗಳಡಿ ಒಗ್ಗೂಡಿಸಿ ಸೂಕ್ಷ್ಮ ನೀರಾವರಿಯೊಂದಿಗೆ ಜೋಡಿಸಲಾಗುವುದು.

ಇತ್ತೀಚಿನ ನವೀಕರಣ​ : 08-04-2022 12:51 PM ಅನುಮೋದಕರು: Naveen L R


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಾನಯನ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080